ಮರ್ಕಟ ಕಿಶೋರ ನ್ಯಾಯ - 
ವೈಷ್ಣವ ಧರ್ಮದಲ್ಲಿ ಭಗವಂತನ ಕೃಪೆಯ ತತ್ತ್ವದ ವಿವರಣೆಯಿದೆ. ಈ ಬಗ್ಗೆ ವಡಗಲೆ ಮತ್ತು ತೆಂಗಲೆ ಸಂಪ್ರದಾಯದವರಲ್ಲಿ ಭಿನ್ನಾಭಿಪ್ರಾಯವಿದೆ. ಈ ಭಿನ್ನಾಭಿಪ್ರಾಯದ ಹಿಂದೆ ಇರುವ ತಾತ್ತ್ವಿಕ ಪ್ರಶ್ನೆ ಹೀಗಿದೆ; ಭಗವಂತನ ಕೃಪೆ ನಿರ್ಹೇತುಕವೆ? ಅದು ಸಹೇತುಕವೆಂದೂ ಇದಕ್ಕೆ ಪುರುಷ ಪ್ರಯತ್ನ ಅವಶ್ಯಕವೆಂದೂ ವಡಗಲೆ ಸಂಪ್ರದಾಯದ ಅಭಿಪ್ರಾಯ. ಎಂದರೆ ಒಂದು ತಾಯಿ ಕಪಿ ತನ್ನ ಶಿಶುವನ್ನು ಜಾಗದಿಂದ ಒಯ್ಯ ಬೇಕಾದರೆ ಮರಿಕಪಿ ತನ್ನ ತಾಯಿಯನ್ನು ತಬ್ಬಿ ಹಿಡಿದುಕೊಳ್ಳುವ ಪ್ರಯತ್ನ ಮಾಡಬೇಕಾದಂತೆ ಚೇತನ ತನ್ನನ್ನು ದೇವರು ಅನುಗ್ರಹಿಸುವ ಮೊದಲು ತನ್ನ ಪ್ರಯತ್ನ ನಡೆಸಬೇಕು ಎನ್ನುವುದು ಇದರ ತಾತ್ಪರ್ಯ.
(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ